ವಿಶ್ವ ಪರಿಸರ ದಿನಾಚರಣೆ

June 5, 2025
ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ದ್ವಾರಕಾ ಕಾರ್ಪೊರೇಶನ್ ಪ್ರೈ ಲಿಮಿಟೆಡ್ ಪುತ್ತೂರು ಹಾಗೂ ನಗರಸಭೆ ಪುತ್ತೂರು ಇವರ ಸಹಯೋಗದಲ್ಲಿ “ಏಕ್ ಪೇಡ್ ಮಾ ಕೇ ನಾಮ್” ಎಂಬ ಯೋಜನೆಯಡಿಯಲ್ಲಿ ಗಿಡಗಳನ್ನು ನೆಡಲಾಯಿತು.

ದ್ವಾರಕಾ ಪ್ರತಿಷ್ಠಾನದ ರಿ. ಪುತ್ತೂರು ಇವರಿಂದ ನಿರ್ವಹಿಸಲ್ಪಡುತ್ತಿರುವ ಚಿಣ್ಣರ ಪಾರ್ಕ್ ಉದ್ಯಾನವನದಲ್ಲಿ ಇಂದು ಪರಿಸರ ದಿನಾಚಾರಣೆ ಆಚರಿಸಲ್ಪಟ್ಟಿತು. ಈ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಅಣ್ಣು ನಾಯಕ್, ಉಪಾಧ್ಯಕ್ಷರಾದ ಬಾಲಕೃಷ್ಣ ಕೆಮ್ಮಿಂಜೆ, ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಸುಂದರ ಪೂಜಾರಿ ಬಡಾವು ಹಾಗೂ ದ್ವಾರಕಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಶ್ರೀ ಗೋಪಾಲಕೃಷ್ಣ ಭಟ್ ಎ., ಪುರಸಭೆಯ ಆರೋಗ್ಯ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಶ್ರೀಯುತ ಶಬರಿನಾಥ್ ರೈ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಗಿಡಗಳನ್ನು ಸ್ಥಳೀಯರಿಗೆ ಹಸ್ತಾಂತರಿಸುವ ಮೂಲಕ ಹಾಗೂ ಚಿಣ್ಣರ ಪಾರ್ಕನಲ್ಲಿ ಗಿಡಗಳನ್ನು ನೆಡುವ ಮೂಲಕ ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ದಲ್ಲಿ ನಗರಸಭೆಯ ಉಪಾಧ್ಯಕ್ಷ ರಾದ ಶ್ರೀ ಬಾಲಕೃಷ್ಣ ಕೆಮ್ಮಿಂಜೆ ಯವರು ಮಾತನಾಡುತ್ತಾ, ದ್ವಾರಕಾ ಸಮೂಹ ಸಂಸ್ಥೆಯ ವತಿಯಿಂದ ನಗರದ ಉದ್ಯಾನವನಗಳನ್ನು ನಿರ್ವಹಣೆಗಾಗಿ ಪಡೆದುಕೊಂಡು ನಿರ್ವಹಿಸುತ್ತಿರುವ ಕಾರ್ಯವನ್ನು ಶ್ಲಾಘಿಸುತ್ತ ಇನ್ನು ಮುಂದೆಯೂ ನಗರದ ಹಾಗೂ ಸಮಾಜದ ಬೆಳವಣಿಗೆಯಲ್ಲಿ ದ್ವಾರಕಾ ಸಮೂಹ ಸಂಸ್ಥೆಯ ಕೊಡುಗೆ ಇರಲಿ ಎಂದು ಆಶಿಸುತ್ತಾ ಶುಭ ಹಾರೈಸಿದರು. ಶ್ರೀಯುತ ಡಾ. ರಾಜೇಶ್ ಬೆಜ್ಜಂಗಳ ಮ್ಯಾನೇಂಜಿಗ್ ಡೈರೆಕ್ಟರ್ ಗ್ರೀನ್ ಇಂಪ್ಯಾಕ್ಟ್ ಫೌಂಡೇಶನ್. ಎನ್.ಜಿ. ಒ. ಇವರು ಕಾರ್ಯಕ್ರಮವನ್ನು ನಿರೂಪಿಸಿ  ವಂದಿಸಿದರು.

Website advt design

Related Blog

Surabhi Goshala
ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುತ್ತಿರುವ ಸುರಭಿ ಗೋಶಾಲೆ ದೇರ್ಲ ಇಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ದೀಪಾವಳಿ ಗೋಪೂಜೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು
parents meeting of sri krishna educational institutions english medium
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಆಂಗ್ಲ ಮಾಧ್ಯಮ ವಿಭಾಗದ ಪೋಷಕರ ಸಭೆ
sri krishna educational institutions primary section parents meeting
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಪ್ರಾಥಮಿಕ ವಿಭಾಗದ ಪೋಷಕರ ಸಭೆ