ಉಚಿತ ವಸಂತ ವೇದಪಾಠ ಶಿಬಿರದ ಸಮಾರೋಪ ಕಾರ್ಯಕ್ರಮ

May 12, 2025
Vasanta Vedapata

11-5-2025 ರಂದು ಉಚಿತ ವಸಂತ ವೇದಪಾಠ ಶಿಬಿರದ ಸಮಾರೋಪ ಕಾರ್ಯಕ್ರಮ ಮುಕ್ರುಂಪಾಡಿ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ನಡೆಯಿತು.

ವಿದ್ಯಾರ್ಥಿಗಳಿಂದ ವೈದಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ” ನಾವು ಒಳ್ಳೆಯ ವಿಚಾರಗಳನ್ನು ಗಳಿಸುವತ್ತ ಮನಮಾಡಬೇಕು ” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಭಾರತೀಯ ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್ ಅವರು ” ಮಕ್ಕಳು ಕುತೂಹಲದಿಂದ ಕೇಳುವ ಪ್ರಶ್ನೆಗಳಿಗೆ ಪೋಷಕರು ಉತ್ತರಿಸಿ ಪ್ರೋತ್ಸಾಹಿಸಬೇಕು ” ಎಂದರು.

ಧರ್ಮಭಾರತೀ ಪತ್ರಿಕೆಯ ಪ್ರಾಕ್ತನ ಪ್ರಧಾನ ಸಂಪಾದಕರಾದ ಮಹೇಶ್ ಎಳ್ಯಡ್ಕ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಹರಿಕೃಷ್ಣ ಭಟ್ ಅರ್ತ್ಯಡ್ಕ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕೃಷ್ಣ ಭಟ್ ಪ್ರತಿಷ್ಠಾನ ಚೂಂತಾರು ಇದರ ಕಾರ್ಯದರ್ಶಿಗಳು ಹಾಗೂ ವೇದಪಾಠ ಶಿಬಿರದ ಮುಖ್ಯಗುರುಗಳಾದ ವೇ. ಮೂ. ಸಿ. ಶಿವಪ್ರಸಾದ ಭಟ್ ಚೂಂತಾರು, ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಗಣರಾಜ ಕುಂಬ್ಳೆ, ನಿವೃತ್ತ ಆರೋಗ್ಯ ನಿರೀಕ್ಷಕರು ಹಾಗೂ ಯೋಗ ಶಿಕ್ಷಕರಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೈದಿಕ ವಿದ್ವಾಂಸರಾದ ವೇ.ಮೂ. ಎತ್ತುಕಲ್ಲು ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು. ಶಿಬಿರದ ವೇದಾಧ್ಯಾಪಕರಾದ ವೇ.ಮೂ ಸಿ. ಶಿವಪ್ರಸಾದ ಭಟ್ ಚೂಂತಾರು, ನವೀನಕೃಷ್ಣ ಎಸ್. ಉಪ್ಪಿನಂಗಡಿ, ಹೇಮಂತ ರಾಜ್ ಪಾಂಡೆ ಜಾರ್ಖಂಡ್, ಶಿವಶರಣ ಭಟ್ ಆರ್ಲಪದವು, ರಾಜಾರಾಮ ಶಾಸ್ತ್ರಿ ಅವರಿಗೆ ಗುರುವಂದನೆ ನಡೆಯಿತು. ಹಾಗೆಯೇ ಸಂಯೋಜಕರಾದ ಶ್ರೀಮತಿ ಶ್ವೇತ ರಾಮಮೋಹನ್ ಹಾಗೂ ಶಿಬಿರವು ಯಶಸ್ವಿಯಾಗುವಲ್ಲಿ ಸಹಕರಿಸಿದ ಎಲ್ಲರನ್ನೂ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರ ಮಾರ್ಗದರ್ಶನದಲ್ಲಿ ಶಿಬಿರಾರ್ಥಿಗಳಿಂದ ಯೋಗದ ಪ್ರಾತ್ಯಕ್ಷಿಕೆ ನೆರವೇರಿತು. ಗಣ್ಯರನ್ನು ಹಾಗೂ ನೆರೆದ ಸರ್ವರನ್ನೂ ವಿದ್ಯಾರ್ಥಿ ಅಭಿನವ ಕಶ್ಯಪ್ ಸ್ವಾಗತಿಸಿ, ಸವ್ಯಸಾಚಿ ಭಟ್ ವಂದಿಸಿದರು. ಮೈತ್ರೇಯ ರಾಮ ಡಿ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು

Website advt design

Related Blog

Surabhi Goshala
ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುತ್ತಿರುವ ಸುರಭಿ ಗೋಶಾಲೆ ದೇರ್ಲ ಇಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ದೀಪಾವಳಿ ಗೋಪೂಜೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು
parents meeting of sri krishna educational institutions english medium
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಆಂಗ್ಲ ಮಾಧ್ಯಮ ವಿಭಾಗದ ಪೋಷಕರ ಸಭೆ
sri krishna educational institutions primary section parents meeting
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಪ್ರಾಥಮಿಕ ವಿಭಾಗದ ಪೋಷಕರ ಸಭೆ