ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಸಾಂದೀಪನಿ ಗುರು ಪ್ರಶಸ್ತಿ ಪ್ರಧಾನ ಸಮಾರಂಭ

September 6, 2025
Teachers’ Day Celebration and Sandipani Guru Award Ceremony at Shrikrishna Educational Institutions, Patte

ದಿನಾಂಕ 05/09/ 2025ನೇ ಶುಕ್ರವಾರದಂದು ದ್ವಾರಕ ಪ್ರತಿಷ್ಠಾನ(ರಿ)ಪುತ್ತೂರು ಇದರ ವತಿಯಿಂದ ನಡೆಸಲ್ಪಡುವ ಶ್ರೀಕೃಷ್ಣ ವಿದ್ಯಾ ಸಂಸ್ಥೆ ಗಳು ಪಟ್ಟೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಸಾಂದೀಪನಿ ಗುರು ಪ್ರಶಸ್ತಿ ಪ್ರಧಾನ ಸಮಾರಂಭ ಜರಗಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ದ್ವಾರಕ ಪ್ರತಿಷ್ಠಾನ (ರಿ) ಪುತ್ತೂರು ಇದರ ಅಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಭಟ್ಟ ಇವರು ವಹಿಸಿ ಮಾತನಾಡಿ, ಸಮಾಜದ ಶ್ರೇಷ್ಠ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವುದು ಶಿಕ್ಷಕರ ದಿನದ ಅರ್ಥಪೂರ್ಣ ಆಚರಣೆಯಾಗಿದೆ ಮತ್ತು ದ್ವಾರಕಾ ಸಂಸ್ಥೆಯು ಈ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರು. ಈ ಸಮಾರಂಭದಲ್ಲಿ ಶ್ರೀಯುತ ಕೆ ಜಯರಾಜ ಆಚಾರ್ಯ ಕಳತ್ತಜೆ, ನಿವೃತ್ತ ಶಿಕ್ಷಕರು ಇವರಿಗೆ ಸಾಂದೀಪನಿ ಗುರು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಶ್ರೀಯುತ ಜಯರಾಜ ಆಚಾರ್ಯ ಕಳತ್ತಜೆಯವರ ವೃತ್ತಿ ಜೀವನ ಹಾಗೂ ಶಿಕ್ಷಣ ಸೇವೆಯ ಕುರಿತು ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀಯುತ ಗಣರಾಜ ಕುಂಬ್ಳೆ ಇವರು ಅಭಿನಂದನಾ ಮಾತುಗಳನ್ನಾಡಿದರು. ಪ್ರೌಢ ಶಾಲಾ ವಿಭಾಗದ ಮುಖ್ಯ ಗುರುಗಳಾದ ಶ್ರೀಮತಿ ಸುಮನ ಬಿ ಮಾತಾಜಿ ಇವರು ಶ್ರೀ .ಕೆ. ಜಯರಾಜ ಆಚಾರ್ ಕಳತ್ತಜೆಯವರ ಪ್ರಶಸ್ತಿ ಪತ್ರವನ್ನು ವಾಚಿಸಿದರು. ದ್ವಾರಕಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್, ನಿವೃತ್ತ ಶಿಕ್ಷಕರಾದ ಶ್ರೀ ಕೆ ಜಯರಾಜ ಆಚಾರ್ಯ ಮತ್ತು ದಂಪತಿಗಳನ್ನು ಶಾಲು,ಹಾರ, ಫಲ ಪುಷ್ಪ, ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಶ್ರೀ ಕಳತ್ತಜೆಯವರು ಶಿಕ್ಷಕರ ವೃತ್ತಿಧರ್ಮ ಹಾಗೂ ವೃತ್ತಿಪರತೆಯ ಕುರಿತು ಅನುಭವವನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಶ್ರೀಕೃಷ್ಣ ವಿದ್ಯಾ ಸಂಸ್ಥೆಯ ಸಂಚಾಲ ಕರಾದ ಶ್ರೀ ವಿಘ್ನೇಶ್ ಹಿರಣ್ಯ, ಶ್ರೀಯುತ ಗಣರಾಜ್ಯ ಕುಂಬ್ಳೆ, ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀಮಾನ್ ರಾಜಗೋಪಾಲ್, ಪ್ರತಿಭಾ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸುಮನ ಮಾತಾಜಿ ಅವರು ಉಪಸ್ಥಿತರಿದ್ದರು. ಬೆಳಗಿನ ಸಮಯದಲ್ಲಿ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಶಿಕ್ಷಕರಿಗಾಗಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಶಿಕ್ಷಕರ ದಿನಾಚರಣೆ ಪ್ರಯುಕ್ತ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಶಿಕ್ಷಕರಿಗೆ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರನ್ನು, ಗೌರವಿಸಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಬಹುಮಾನದ ಪಟ್ಟಿಯನ್ನು ಶ್ರೀಮಾನ್ ವಿಶ್ವನಾಥ್ ಬಿ ಅವರು ವಾಚಿಸಿದರು. ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕರಾದ ಶ್ರೀಯುತ ವಿಘ್ನೇಶ್ ಹಿರಣ್ಯ ಸ್ವಾಗತಿಸಿ, ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀಮಾನ್ ರಾಜಗೋಪಾಲ್ ಅವರು ವಂದಿಸಿದರು. ಶ್ರೀಮತಿ ಭವಿತಾ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮಾನ್ ಎಸ್, ಜಿ ಕೃಷ್ಣ, ನಿವೃತ್ತ ಮುಖ್ಯ ಗುರುಗಳಾದ ಶ್ರೀಮಾನ್ ನಾರಾಯಣ ಪಾಟಾಳಿ, ನಿವೃತ್ತ ಮುಖ್ಯ ಗುರುಗಳಾದ ಶ್ರೀಮತಿ ಶಂಕರಿ ಮಾತಾಜಿ, ಶ್ರೀಯುತ,ಕೆ.ಜಯರಾಜ್ ಆಚಾರ್ಯರ ಕುಟುಂಬಸ್ಥರು ಉಪಸ್ಥಿತರಿದ್ದರು. ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಎಲ್ಲ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Dwaraka Ad

Related Blog

ಡ್ರಾಯಿಂಗ್ ಗ್ರೇಡ್ ಪರೀಕ್ಷೆ 2025-26 – ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ 100 ಶೇಕಡಾ ಫಲಿತಾಂಶ
dwarkotsava 2026 invitation release - Featured
ದ್ವಾರಕೋತ್ಸವ – 2026 ಆಮಂತ್ರಣ ಪತ್ರಿಕೆ ಬಿಡುಗಡೆ
pre-exam preparation
ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ತರಬೇತಿ