ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರತಿಭಾ ಪ್ರೌಢಶಾಲೆ ಪಟ್ಟೆಗೆ 100%

May 2, 2025
SSLC- Result 2025

ಪಟ್ಟೆ: 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ಪ್ರತಿಭಾ ಪ್ರೌಢಶಾಲೆ ಪಟ್ಟೆ ಶೇಕಡಾ 100 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆ ಬರೆದ ಒಟ್ಟು 33 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಬಾಣಪದವು ಬಡಗನ್ನೂರು ವಾಸಿಗಳಾದ ಶ್ರೀಮತಿ ಸುನೀತಾ ಹಾಗೂ ಶ್ರೀ ರಾಧಾಕೃಷ್ಣ ದಾಸ್ ದಂಪತಿಗಳ ಪುತ್ರಿಯಾದ ಕುI ರಶ್ಮಿತಾ 593 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕುಮಾರಿ ತನುಶ್ರೀ ರೈ 591 (ಬಿ ಗಂಗಾಧರ ರೈ ಮತ್ತು ಯಶೋಧಾ ಬಡಕ್ಕಾಯೂರು ಇವರ ಪುತ್ರಿ, ) ದಿಶಾ ಜೆ ರೈ 587 (ಜಯಕರ ಬಿ ರೈ ಮತ್ತು ನಯನ ಜೆ ರೈ ಬಡಕ್ಕಾಯೂರು ಇವರ ಪುತ್ರಿ ) ಫಾತಿಮಾ ಜಸೀಲ 574(ಅಬ್ದುಲ್ ಖಾದರ್ ಮತ್ತು ಜೆಮಿಲಾ ಪೆರಿಗೇರಿ ಇವರ ಪುತ್ರಿ), ಕೀರ್ತನ್ ಎಂ ಎ 568 (ಅರುಣ್ ಕುಮಾರ್ ಮತ್ತು ಹೇಮಾವತಿ ಬಿ ಮುಂಡೋಳೆ ಇವರ ಸುಪುತ್ರ), ನವನೀತ್ ಪಿ 564 (ಪ್ರಭಾಕರ ನಾಯಕ್ ಮತ್ತು ಜಯಶೀಲ ಪೆರಿಗೇರಿ ಇವರ ಸುಪುತ್ರ), ವೀಕ್ಷಾ ಎ 552 ( ಚಿದಾನಂದ ಗೌಡ ಮತ್ತು ಶಶಿಕಲಾ ಎಸ್ ಆಲಂತಡ್ಕ ಇವರ ಪುತ್ರಿ ), ಕಾರ್ತಿಕ್ ಬಿ 549 (ಸತೀಶ ನಾಯಕ್ ಮತ್ತು ವೀಣಾ ಕುಮಾರಿ ಕೆ ಮುಡುಪಿನಡ್ಕ ಇವರ ಸುಪುತ್ರ), ತನುಶ್ರೀ ಬಿ 541 (ಶೇಷಪ್ಪ ನಾಯ್ಕ ಮತ್ತು ವಸಂತಿ ಅಣಿಲೆ ಇವರ ಪುತ್ರಿ ) ಪವನ್ ಚಂದ್ರ 538 ( ಬಾಲಕೃಷ್ಣ ಎ ಮತ್ತು ಪ್ರೇಮಲತಾ ಅಣಿಲೆ ಇವರ ಸುಪುತ್ರ) .
ಪಟ್ಟೆ ಪ್ರತಿಭಾ ಪ್ರೌಢಶಾಲೆಯು ನಿರಂತರ ವರ್ಷಗಳಲ್ಲಿ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಚಟುವಟಿಕೆಗಳಲ್ಲಿ ವಿಶಿಷ್ಟ ಸಾಧನೆ ಮಾಡುತ್ತಾ ಬಂದಿದ್ದು ಪ್ರಸಕ್ತ ಸಾಲಿನ ಫಲಿತಾಂಶವು ಶಾಲೆಯ ಶೈಕ್ಷಣಿಕ ಗುಣಮಟ್ಟದ ಕೈಗನ್ನಡಿಯಾಗಿದೆ. ಈ ಫಲಿತಾಂಶದ ಹಿಂದಿನ ಪ್ರೇರಕ ಶಕ್ತಿಗಳಾದ ಪ್ರತಿಭಾ ಪ್ರೌಢಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕೇತರ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದು ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ ಹಾಗೂ ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಇದರ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ಹಾಗೂ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Website advt design

Related Blog

Surabhi Goshala
ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುತ್ತಿರುವ ಸುರಭಿ ಗೋಶಾಲೆ ದೇರ್ಲ ಇಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ದೀಪಾವಳಿ ಗೋಪೂಜೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು
parents meeting of sri krishna educational institutions english medium
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಆಂಗ್ಲ ಮಾಧ್ಯಮ ವಿಭಾಗದ ಪೋಷಕರ ಸಭೆ
sri krishna educational institutions primary section parents meeting
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಪ್ರಾಥಮಿಕ ವಿಭಾಗದ ಪೋಷಕರ ಸಭೆ