ದಿನಾಂಕ 29.05.2025ನೇ ಗುರುವಾರದಂದು ಶ್ರೀ ಕೃಷ್ಣ ವಿದ್ಯಾ ಸಂಸ್ಥೆ ಪಟ್ಟೆ ಇಲ್ಲಿ ಶ್ರೀ ಕೃಷ್ಣ ಆಂಗ್ಲ ಮಾಧ್ಯಮ ಶಾಲೆಯ ಉದ್ಘಾಟನಾ ಸಮಾರಂಭವು ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷರು, ದ್ವಾರಕ ಪ್ರತಿಷ್ಠಾನ (ರಿ) ಪುತ್ತೂರು ಇದರ ಅಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಗ್ರಾಮಾಂತರ ಪ್ರದೇಶದಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿರುವ ಪಟ್ಟೆ ವಿದ್ಯಾಸಂಸ್ಥೆಗಳಲ್ಲಿ ಈ ವರ್ಷದಿಂದ ನೂತನವಾಗಿ ಶ್ರೀ ಕೃಷ್ಣ ಆಂಗ್ಲ ಮಾಧ್ಯಮ ಶಾಲೆಯು ಪ್ರಾರಂಭವಾಗುತ್ತವೆ ಎಂದು ನುಡಿದರು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಚಾಲಕರಾದ ಶ್ರೀಯುತ ವಿಘ್ನೇಶ್ ಹಿರಣ್ಯ ರವರು ಮಾತನಾಡಿ ಆಂಗ್ಲ ಭಾಷೆಯ ಶಿಕ್ಷಣ ಕನ್ನಡ ಮಾಧ್ಯಮದ ಶಿಕ್ಷಣದ ಮಹತ್ವ ತಿಳಿಯಪಡಿಸಿದರು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಯುತ ಅಮೃತ ಕೃಷ್ಣ ,ನಿರ್ದೇಶಕರಾದ ಶ್ರೀ ಗಣರಾಜ ಕುಂಬ್ಳೆ , ಅಮೃತ ಎ ಶಾನುಭಾಗ್,ವೆಂಕಟ ಕೃಷ್ಣ ಶರ್ಮ ಶ್ರೀಯುತ ಪರಮೇಶ್ವರ ಭಟ್ ಪ್ರತಿಭಾ ಪ್ರೌಢಶಾಲೆ ಎಸ್ ಡಿ ಎಂಸಿ ಅಧ್ಯಕ್ಷರಾದ ಶ್ರೀ ಲಿಂಗಪ್ಪಗೌಡ ಮೋಡಿಕೆ ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಕೇಶವ ಪ್ರಸಾದ್ ನೀಲಗಿರಿ, ಪ್ರತಿಭಾ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸುಮನ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀಯುತ ರಾಜಗೋಪಾಲ ಎನ್ ಉಪಸ್ಥಿತರಿದರು. ವಿದ್ಯಾರ್ಥಿಗಳನ್ನು ಬ್ಯಾಂಡ್ ಸೆಟ್ ನ ಮೂಲಕ ಮೆರವಣಿಗೆ ಯೊಂದಿಗೆ ಆರತಿ ತಿಲಕ ಇಟ್ಟು ಸಿಹಿ ತಿಂಡಿಯನ್ನು ನೀಡಿ ಸ್ವಾಗತಿಸಲಾಯಿತು. ಸರಕಾರದಿಂದ ಕೊಡಮಾಡಿದ ಉಚಿತ ಪಠ್ಯಪುಸ್ತಕವನ್ನು ಕನ್ನಡ ಮಾಧ್ಯಮದ ಒಂದನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು ಶ್ರೀಯುತ ರಾಜಗೋಪಾಲ ಪ್ರಾಸ್ತಾವಿಕ ಮಾತುಗಳಿಂದ ಸ್ವಾಗತಿಸಿ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಜ್ಯೋತಿಕುಮಾರಿ ರೈ ಅವರು ವಂದಿಸಿದರು.
ಇಂಗ್ಲಿಷ್ ಶಿಕ್ಷಕಿಯಾದ ಶ್ರೀಮತಿ ಶೈಲಶ್ರೀ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕೃಷ್ಣ ಆಂಗ್ಲ ಮಾಧ್ಯಮ, ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರತಿಭಾ ಪ್ರೌಢಶಾಲೆಯ ಶಿಕ್ಷಕರು ವಿವಿಧ ಕಾರ್ಯಕ್ರಮವನ್ನು ನಿರ್ವಹಿಸಿದರು.