ಪ್ರತಿಭಾ ಕಾರಂಜಿ: ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ 6 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

November 23, 2025
shree krishna educational institutions-six-students selected for taluk level

ಪಟ್ಟೆ ಬಡಗನ್ನೂರು : ದಿನಾಂಕ 22-11-2025 ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದರ್ಬೆತಡ್ಕ ಇಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ 6 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಿರಿಯರ ವಿಭಾಗದಲ್ಲಿ ರಶ್ಮಿತ್ 4 ನೇ ತರಗತಿ ಕ್ಲೇ ಮಾಡಲಿಂಗ್ ಪ್ರಥಮ, ಪರೀಕ್ಷಿತ್ ಬಿ ಸಿ 4 ನೇ ತರಗತಿ ಆಶು ಭಾಷಣ ಪ್ರಥಮ, ಹಿರಿಯರ ವಿಭಾಗದಲ್ಲಿ ಶನ್ಮಿತಾ ಕೆ 7 ನೇ ತರಗತಿ ಕನ್ನಡ ಕಂಠಪಾಠ ಪ್ರಥಮ, ಫಿದಾ ಫಾತಿಮಾ ಬೀವಿ 7 ನೇ ತರಗತಿ ಇಂಗ್ಲೀಷ್ ಕಂಠಪಾಠ ಪ್ರಥಮ, ಮಾನ್ವಿ ರೈ 5 ನೇ ತರಗತಿ ಕಥೆ ಹೇಳುವುದು ಪ್ರಥಮ ಹಾಗೂ ಚಿಂತಶ್ರೀ 5 ನೇ ತರಗತಿ ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಕಿರಿಯರ ವಿಭಾಗದಲ್ಲಿ ದಿಶಾಲಿ ಎಸ್ ಪಿ 4 ನೇ ತರಗತಿ ಕಥೆ ಹೇಳುವುದು ತೃತೀಯ, ಅಸ್ಮಿತಾ ಎ 4 ನೇ ತರಗತಿ ಅಭಿನಯ ಗೀತೆ ತೃತೀಯ ಹಾಗೂ ಹಿರಿಯರ ವಿಭಾಗದಲ್ಲಿ ಸಾತ್ವಿಕಾ ಎಸ್ ಎನ್ 6 ನೇ ತರಗತಿ ಕ್ಲೇ ಮಾಡಲಿಂಗ್ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ಒಟ್ಟು 10 ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. ಈ ಸಾಧನೆಯು ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಗುಣಮಟ್ಟದ ಕೈಗನ್ನಡಿಯಾಗಿದೆ. ಮತ್ತು ಈ ಫಲಿತಾಂಶಕ್ಕೆ ಕಾರಣರಾದ ಶಾಲೆಯ ಎಲ್ಲಾ ಶಿಕ್ಷಕ ವರ್ಗದವರು ಅಭಿನಂದನೆಗಳಿಗೆ ಅರ್ಹರು ಎಂದು ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಹಾಗೂ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ. ವಿಜೇತರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಚಾಲಕರಾದ ಶ್ರೀಮಾನ್ ವಿಘ್ನೇಶ್ ಹಿರಣ್ಯ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಗುರುಗಳಾದ ಶ್ರೀಮಾನ್ ರಾಜಗೋಪಾಲ ಎನ್ , ಪ್ರೌಢ ಶಾಲಾ ವಿಭಾಗದ ಮುಖ್ಯ ಗುರುಗಳಾದ ಮಾತಾಜಿ ಸುಮನಾ ಬಿ ಹಾಗೂ ಎಲ್ಲಾ ಶಿಕ್ಷಕರು ಅಭಿನಂದಿಸಿದ್ದಾರೆ.

Dwaraka Ad

Related Blog

ಡ್ರಾಯಿಂಗ್ ಗ್ರೇಡ್ ಪರೀಕ್ಷೆ 2025-26 – ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ 100 ಶೇಕಡಾ ಫಲಿತಾಂಶ
dwarkotsava 2026 invitation release - Featured
ದ್ವಾರಕೋತ್ಸವ – 2026 ಆಮಂತ್ರಣ ಪತ್ರಿಕೆ ಬಿಡುಗಡೆ
pre-exam preparation
ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ತರಬೇತಿ