ಪಟ್ಟೆ ಬಡಗನ್ನೂರು: ಇಲ್ಲಿನ ದ್ವಾರಕಾ ಪ್ರತಿಷ್ಠಾನ(ರಿ) ಪುತ್ತೂರು ಇದರ ವತಿಯಿಂದ ನಡೆಸಲ್ಪಡುವ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ 2025-26ನೇ ಸಾಲಿನ ರಾಮಾಯಣ ಪರೀಕ್ಷೆಯು ದಿನಾಂಕ 31/08/2025 ರ ಆದಿತ್ಯವಾರದಂದು ನಡೆಯಿತು. ಕೌಡಿಚ್ಚಾರು, ಪಟ್ಟೆ, ಬೆಟ್ಟಂಪಾಡಿ, ಸುಳ್ಯಪದವು ಹಾಗೂ ಈಶ್ವರಮಂಗಲ ಪರಿಸರದ ಸುಮಾರು ಹತ್ತಕ್ಕೂ ಹೆಚ್ಚು ಶಾಲೆಗಳ ಸುಮಾರು 53 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 5 ರಿಂದ 8ನೇತರಗತಿಯ ವಿದ್ಯಾರ್ಥಿಗಳಿಗೆ ರಾಮಾಯಣದ ಕುರಿತ ಆಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದ್ವಾರಕಾ ಪ್ರತಿಷ್ಠಾನವು ಈ ಪರೀಕ್ಷೆಯನ್ನು ವಿಶೇಷವಾಗಿ ಆಯೋಜಿಸಿದೆ.
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಶಿಕ್ಷಕರು ಈ ಪರೀಕ್ಷೆಯಲ್ಲಿ ಸಹಕರಿಸಿದರು. ಸಂಸ್ಥೆಗಳ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ, ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀ ರಾಜಗೋಪಾಲ ಎನ್ ಉಪಸ್ಥಿತರಿದ್ದರು.