ಪಟ್ಟೆ ಬಡಗನ್ನೂರು: ಇಲ್ಲಿನ ಕೌಡಿಚ್ಚಾರು- ಮುಡಿಪುನಡ್ಕ-ಬೆಟ್ಟಂಪಾಡಿ ರಸ್ತೆಯ ಪಟ್ಟೆಯಲ್ಲಿ ರಸ್ತೆ ತಡೆ ಬಾರಿಕೇಡ್ಗಳನ್ನು ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ವತಿಯಿಂದ ಅಳವಡಿಸಲಾಯಿತು. ಈಶ್ವರಮಂಗಲ ಆರಕ್ಷಕ ಹೊರಠಾಣಾ ವಲಯದ ಈ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಈ ಕ್ರಮವನ್ನು ಕೈಗೊಳ್ಳಲಾಯಿತು. ರಸ್ತೆ ಬಾರಿಕೇಡ್ ಅಳವಡಿಕೆಯಿಂದಾಗಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ರಸ್ತೆ ದಾಟಬಹುದು ಹಾಗೂ ಎಲ್ಲಾ ವಾಹನಗಳು ಶಾಲಾ ಪ್ರದೇಶದಲ್ಲಿ ನಿಧಾನವಾಗಿ ಚಲಿಸುವಂತಾಗಲು ಅನುಕೂಲವಾಗಲಿದೆ ಎಂದು ವಿದ್ಯಾಸಂಸ್ಥೆಗಳ ಪ್ರೌಢ ಶಾಲಾ ವಿಭಾಗದ ಮುಖ್ಯಗುರುಗಳಾದ ಶ್ರೀಮತಿ ಸುಮನಾ ಬಿ ಮಾತಾಜಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಗಳ ಸಂಚಾಲಕರಾದ ಶ್ರೀಮಾನ್ ವಿಘ್ನೇಶ್ ಹಿರಣ್ಯ, ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಶ್ರೀಮಾನ್ ರಾಜಗೋಪಾಲ ಎನ್, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮಾನ್ ಮೋನಪ್ಪ ಎಂ ಉಪಸ್ಥಿತರಿದ್ದರು.