ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಹಿರಿಯ ಪ್ರಾಥಮಿಕ ವಿಭಾಗದ ಪ್ರಥಮ ಪೋಷಕರ ಸಭೆ

June 23, 2025
High School Parents Meeting

ಪಟ್ಟೆ ಬಡಗನ್ನೂರು: ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆ ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ಪ್ರಥಮ ಪೋಷಕರ ಸಭೆಯು ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ ಇವರು ವಹಿಸಿ ಮಾತನಾಡುತ್ತಾ ಉತ್ತಮ ಶಿಕ್ಷಣವನ್ನು ನೀಡುವುದು ಮತ್ತು ಸುಸಂಸ್ಕೃತ ಸಮಾಜವನ್ನು ನಿರ್ಮಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನಮ್ಮ ಧ್ಯೇಯ ಆಗಿದೆ ಅದಕ್ಕೆ ಪೋಷಕರೆಲ್ಲರ ಸಹಕಾರವನ್ನು ನೀಡಬೇಕಾಗಿ ವಿನಂತಿಸಿಕೊಂಡರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮಾನ್ ಗೋಪಾಲಕೃಷ್ಣ ಭಟ್ ಮಾತಾಡಿ ನಮ್ಮ ಧ್ಯೇಯ ಮತ್ತು ಗುರಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಾಗಿದೆ ಇದಕ್ಕೆ ಪೋಷಕರೆಲ್ಲರ ಸಹಕಾರಬೇಕೆಂದು ಕೇಳಿಕೊಂಡರು. ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀಮಾನ್ ರಾಜ್ ಗೋಪಾಲ ಯನ್ ಅವರು ಶಾಲೆಯ ಮೂಲಭೂತ ಸೌಕರ್ಯಗಳು ಮತ್ತು ಶಾಲೆಯಲ್ಲಿ ನಡೆಯುವ ದೈನಂದಿನ ಚಟುವಟಿಕೆಗಳ ಬಗ್ಗೆ ತಿಳಿಯಪಡಿಸಿದರು. ಪ್ರಾಥಮಿಕ ವಿಭಾಗದ SDMC ಅಧ್ಯಕ್ಷರಾದ ಶ್ರೀಮಾನ್ ಕೇಶವಪ್ರಸಾದ್ ಮಾತಾಡಿ ನಾವೆಲ್ಲರೂ ಆಡಳಿತ ಮಂಡಳಿಯ ಕೆಲಸ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಪೋಷಕರಲ್ಲಿ ವಿನಂತಿಸಿ ಕೊಂಡರು. ಪ್ರತಿಭಾ ಪ್ರೌಢಶಾಲೆಯ ಮುಖ್ಯ ಗುರುಗಳಾದ ಮಾತಾಜಿ ಸುಮನಾ ಬಿ ಪ್ರಾಸ್ತವಿಕಾ ಮಾತನಾಡುತ್ತಾ ಪೋಷಕರೆಲ್ಲರ ಸಹಕಾರ ನಮ್ಮ ಜೊತೆಗೆ ಇರಬೇಕೆಂದು ಕೇಳಿಕೊಂಡರು. ಪ್ರಾಥಮಿಕ ವಿಭಾಗದ ಇಂಗ್ಲಿಷ್ ಶಿಕ್ಷಕಿ ಚಿತ್ರಾ ಮಾತಾಜಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ನೆರೆದಿರುವ ಪೋಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಂಪ್ಯೂಟರ್ ಶಿಕ್ಷಕಿ ಧನಲಕ್ಷ್ಮಿ ಮಾತಾಜಿ ವಂದಿಸಿ, ಕನ್ನಡ ಶಿಕ್ಷಕರಾದ ಶ್ರೀಮಾನ್ ರಾಮಚಂದ್ರಪ್ಪರವರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.

Website advt design

Related Blog

Surabhi Goshala
ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುತ್ತಿರುವ ಸುರಭಿ ಗೋಶಾಲೆ ದೇರ್ಲ ಇಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ದೀಪಾವಳಿ ಗೋಪೂಜೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು
parents meeting of sri krishna educational institutions english medium
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಆಂಗ್ಲ ಮಾಧ್ಯಮ ವಿಭಾಗದ ಪೋಷಕರ ಸಭೆ
sri krishna educational institutions primary section parents meeting
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಪ್ರಾಥಮಿಕ ವಿಭಾಗದ ಪೋಷಕರ ಸಭೆ