ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಯಲ್ಲಿ ಗೀತಾ ಜಯಂತಿ ಉತ್ಸವ

December 2, 2025
geetha jayanti festival at sri krishna educational institutions

ಪಟ್ಟೆ ಬಡಗನ್ನೂರು:- ದಿನಾಂಕ 01/12/2025 ನೇ ಸೋಮವಾರದಂದು ದ್ವಾರಕ ಪ್ರತಿಷ್ಠಾನ( ರಿ) ಪುತ್ತೂರು ಇದರ ವತಿಯಿಂದ ನಡೆಸಲ್ಪಡುವ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ ಇಲ್ಲಿ ಗೀತಾ ಜಯಂತಿ ಉತ್ಸವವನ್ನು ಆಚರಿಸಲಾಯಿತು. ಭಗವಾನ್ ಶ್ರೀ ಕೃಷ್ಣ ಪರಮಾತ್ಮನಿಗೆ ಪುಷ್ಪಾರ್ಚನೆ ಮಾಡಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮಾನ್ ಗೋಪಾಲಕೃಷ್ಣ ಭಟ್ ಅವರು ದೀಪ ಪ್ರಜ್ವಲನೆಯನ್ನು ಮಾಡಿದರು. ನಂತರ ಭಗವಾನ್ ಶ್ರೀ ಕೃಷ್ಣನಿಗೆ ಮತ್ತು ಭಗವದ್ಗೀತೆಗೆ ಮಂಗಲ ನೀರಾಜನ ನೆರವೇರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ ನಡೆಯಿತು. ಶ್ರೀಮಾನ್ ಬಾಲಕೃಷ್ಣ ಭಟ್ ಕೇಕನಣಾಜೆ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು ಸುಮಾರು 45 ನಿಮಿಷಗಳ ಕಾಲ ಗೀತಾರ್ಥ ಮಂಥನ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪದೇಶಿಸಿದರು. ಸಂಸ್ಥೆಗಳ ಅಧ್ಯಕ್ಷರಾದ ಶ್ರೀಮಾನ್ ಗೋಪಾಲಕೃಷ್ಣ ಭಟ್ ಅವರು ಶ್ರೀಮಾನ್ ಬಾಲಕೃಷ್ಣ ಭಟ್ ಕೇಕಣಾಜೆಯವರಿಗೆ ಸ್ಮರಣೆಕೆ ನೀಡಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಗಣರಾಜ್ ಕುಂಬ್ಳೆ, ಸಂಸ್ಥೆಗಳ ಸಂಚಾಲಕರಾದ ಶ್ರೀಮಾನ್ ವಿಘ್ನೇಶ ಹಿರಣ್ಯ, ಪ್ರೌಢಶಾಲಾ ವಿಭಾಗದ ಮುಖ್ಯ ಗುರುಗಳಾದ ಶ್ರೀಮತಿ ಸುಮನ ಮಾತಾಜಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಗುರುಗಳಾದ ಶ್ರೀಮಾನ್ ರಾಜಗೋಪಾಲ್.ಏನ್ ಉಪಸ್ಥಿತರಿದ್ದರು. ಶ್ರೀಮತಿ ಪ್ರಜ್ಞ ಮಾತಾಜಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶೈಲಶ್ರೀ ಮಾತಾಜಿ ವಂದಿಸಿದರು. ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.

Dwaraka Ad

Related Blog

ಡ್ರಾಯಿಂಗ್ ಗ್ರೇಡ್ ಪರೀಕ್ಷೆ 2025-26 – ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ 100 ಶೇಕಡಾ ಫಲಿತಾಂಶ
dwarkotsava 2026 invitation release - Featured
ದ್ವಾರಕೋತ್ಸವ – 2026 ಆಮಂತ್ರಣ ಪತ್ರಿಕೆ ಬಿಡುಗಡೆ
pre-exam preparation
ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ತರಬೇತಿ