ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ವಕೀಲರ ಸಂಘ, ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಮತ್ತು ದ್ವಾರಕಾ ಪ್ರತಿಷ್ಠಾನ ವತಿಯಿಂದ “ಉಚಿತ ಕುಡಿಯುವ ನೀರಿನ ವಿತರಣೆ ಸೌಲಭ್ಯ” ಉದ್ಘಾಟನೆ

April 18, 2025
Free Drinking Water

ಪುತ್ತೂರು :- ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವದ ದಿನದಂದು ಪುತ್ತೂರು ವಕೀಲರ ಸಂಘ, ಸರಸ್ವತೀ ಚಾರಿಟೇಬಲ್ ಟ್ರಸ್ಟ್ ಹಾಗೂ ದ್ವಾರಕಾ ಪ್ರತಿಷ್ಠಾನದ ವತಿಯಿಂದ ದೇವಳದ ಎದುರು ಗದ್ದೆಯಲ್ಲಿ 7ನೇ ವರುಷದ “ಉಚಿತ ಕುಡಿಯುವ ನೀರಿನ ವಿತರಣೆ ಸೌಲಭ್ಯ” 17-04-2025 ರಂದು ನಡೆಯಿತು. 5ನೇ ಹೆಚ್ಚುವರಿ ಜಿಲ್ಲಾ ಸಿವಿಲ್ ನ್ಯಾಯಾಲಯ ನ್ಯಾಯಾಧೀಶರಾದ ಶ್ರೀಮತಿ ಸರಿತಾ ಡಿ ಅವರು ಉಚಿತ ನೀರು ವಿತರಣಾ ಸೌಲಭ್ಯವನ್ನು ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷರು ಜಗನ್ನಾಥ್ ರೈ, ಶ್ರೀಮತಿ ಪ್ರಿಯ ರವಿ ಜೊಗ್ಲೆಕರ್, ದೇವರಾಜ್ ವೈ.ಎಚ್, ಶ್ರೀಮತಿ ಅರ್ಚನಾ ಕೆ. ಉನ್ನಿತಾನ್, ಶಿವಣ್ಣ ಎಚ್. ಆರ್, ಯೋಗೇಂದ್ರ ಶೆಟ್ಟಿ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಈಶ್ವರ ಭಟ್ ಪಂಜಿಗುಡ್ಡೆ, ಸರಸ್ವತಿ ಚಾರಿಟೇಬಲ್ ಮ್ಯಾನೇಜಿಂಗ್ ಟ್ರಸ್ಟಿ, ಶ್ರೀ ಎಸ್. ಆರ್ ಸತೀಶ್ಚಂದ್ರ, ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಮತ್ತು ಇತರರು ಉಪಸ್ಥಿತರಿದ್ದರು.

Free Drinking Water

ಏಪ್ರಿಲ್ ನ ಬೇಸಿಗೆಯಲ್ಲಿ ದಾಹ ಅಧಿಕ ಇರುತ್ತದೆ. ಜಾತ್ರೆಗೆ ಆಗಮಿಸಿದ ಭಕ್ತಾಧಿಗಳ ಬಾಯಾರಿಕೆ ತಣಿಸಲು ಹಮ್ಮಿಕೊಂಡಿದ್ದ ಉಚಿತ ಕುಡಿಯುವ ನೀರಿನ ವ್ಯವಸ್ಥೆಯನ್ನು ಬಹಳಷ್ಟು ಮಂದಿ ಸದುಪಯೋಗಪಡಿಸಿಕೊಂಡರು.

Dwaraka Ad

Related Blog

ಡ್ರಾಯಿಂಗ್ ಗ್ರೇಡ್ ಪರೀಕ್ಷೆ 2025-26 – ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ 100 ಶೇಕಡಾ ಫಲಿತಾಂಶ
dwarkotsava 2026 invitation release - Featured
ದ್ವಾರಕೋತ್ಸವ – 2026 ಆಮಂತ್ರಣ ಪತ್ರಿಕೆ ಬಿಡುಗಡೆ
pre-exam preparation
ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ತರಬೇತಿ