ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆಯಲ್ಲಿ FOCUS 360 ಶಿಕ್ಷಕರ ತರಬೇತಿ ಮತ್ತು ಮಾಹಿತಿ ಕಾರ್ಯಗಾರ

August 2, 2025

ಪಟ್ಟೆ ಬಡಗನ್ನೂರು : ದ್ವಾರಕ ಪ್ರತಿಷ್ಠಾನ (ರಿ) ಪುತ್ತೂರು ಇದರ ವತಿಯಿಂದ ನಡೆಸಲ್ಪಡುವ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ ಇಲ್ಲಿ ದಿನಾಂಕ 1.8.2025ನೇ ಶುಕ್ರವಾರದಂದು ಶಿಕ್ಷಕರ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ನಡೆಯಿತು.ಶ್ರೀರಾಮಕುಂಜ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀಮಾನ್ ಸತೀಶ್ ಭಟ್ ಹಾಗೂ JCI ತರಬೇತುದಾರ ರಾದ ಶ್ರೀ ಪಶುಪತಿ ಶರ್ಮ ಇವರ ತರಬೇತಿ ನಡೆಸಿಕೊಟ್ಟರು. FOCUS 360 ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಕಾರ್ಯಗಾರದಲ್ಲಿ ಶಿಕ್ಷಕ ವೃತ್ತಿಯು ಒಂದು ಸೇವೆ ಎಂದು ಪರಿಗಣಿಸಿ ಪ್ರೀತಿಯಿಂದ ಸೇವೆ ಸಲ್ಲಿಸಿದರೆ ಅದು ಮುಂದಿನ ಜೀವನಕ್ಕೂ ಆಧಾರವಾಗಿರುತ್ತದೆ. ಶಿಕ್ಷಕರು ಹೊಂದಿರಬೇಕಾದ ಅಗತ್ಯತೆಗಳ ಕುರಿತು ತರಬೇತುದಾರರು ಮಾಹಿತಿಯನ್ನು ನೀಡಿದರು. ಸಂಸ್ಥೆಯ ಸಂಚಾಲಕರಾದ ಶ್ರೀವಿಘ್ನೇಶ ಹಿರಣ್ಯ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಸುಮನ ಮಾತಾಜಿ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಶ್ರೀ ರಾಜಗೋಪಾಲ್ ಶ್ರೀಮಾನ್ ವಂದಿಸಿದರು. ಕಾರ್ಯಗಾರದಲ್ಲಿ ಸಂಸ್ಥೆ ಎಲ್ಲ ಭೋದಕ ವರ್ಗದವರು ಉಪಸ್ಥಿತರಿದ್ದರು.

Dwaraka Ad

Related Blog

ಡ್ರಾಯಿಂಗ್ ಗ್ರೇಡ್ ಪರೀಕ್ಷೆ 2025-26 – ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ 100 ಶೇಕಡಾ ಫಲಿತಾಂಶ
dwarkotsava 2026 invitation release - Featured
ದ್ವಾರಕೋತ್ಸವ – 2026 ಆಮಂತ್ರಣ ಪತ್ರಿಕೆ ಬಿಡುಗಡೆ
pre-exam preparation
ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ತರಬೇತಿ