ದ್ವಾರಕಾ ಪ್ರತಿಷ್ಠಾನ (ರಿ . ) ಪುತ್ತೂರು ಇದರ ವತಿಯಿಂದ ಜರಗುವ ದ್ವಾರಕೋತ್ಸವ -2026 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜನವರಿ 1ರಂದು ಪುತ್ತೂರಿನ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ಜರಗಿತು. ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಶ್ರೀ ಮೋಹನ್ ಭಟ್ ಇವರು ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿ ದ್ವಾರಕೋತ್ಸವ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ವಹಿಸಿದ್ದರು. ಸಭೆಯಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಶ್ರೀಮತಿ ಅಶ್ವಿನಿ ಎನ್., ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಅಮೃತಕೃಷ್ಣ ಎನ್. ಉಪಸ್ಥಿತರಿದ್ದರು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾಗಿರುವ ಶ್ರೀ ಗಣರಾಜ ಕುಂಬ್ಳೆಯವರು ಆಮಂತ್ರಣ ಪತ್ರವನ್ನು ವಾಚಿಸಿದರು. ನವೀನಕೃಷ್ಣ ಉಪ್ಪಿನಂಗಡಿ, ಅವನೀಶಕೃಷ್ಣ ಮಿಂಚಿನಡ್ಕ ಪಾರ್ಥಿಸಿದರು. ಶ್ರೀ ಗಣರಾಜ ಕುಂಬ್ಳೆಯವರು ಕಾರ್ಯಕ್ರಮ ನಿರೂಪಣೆ ಮತ್ತು ಸ್ವಾಗತವನ್ನು ಮಾಡಿದರು. ಶ್ರೀ ಅಮೃತಕೃಷ್ಣ ಎನ್. ಇವರು ವಂದಿಸಿದರು. ಇದೇ ಬರುವ ಫೆ. 01ರಂದು ದ್ವಾರಕೋತ್ಸವ ಕಾರ್ಯಕ್ರಮ ಪುತ್ತೂರಿನ ಮುಕ್ರಂಪಾಡಿಯ ಗೋಕುಲ ಬಡಾವಣೆಯಲ್ಲಿ ನಡೆಯಲಿದೆ.