ದ್ವಾರಕೋತ್ಸವ 2025

February 17, 2025
Dwarakotsava

16-2-2025ನೇ ದಿನಾಂಕದಂದು ದ್ವಾರಕಾ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮುಕ್ರುಂಪಾಡಿಯ ಗೋಕುಲ ಬಡಾವಣೆಯಲ್ಲಿ ನಡೆಯಿತು.

ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಗಣರಾಜ ಕುಂಬ್ಳೆ  ಅವರು ಗಣ್ಯರನ್ನೂ ಹಾಗೂ ನೆರೆದ ಸರ್ವರನ್ನೂ ಸ್ವಾಗತಿಸಿದರು.
ಸಂಸ್ಥೆ ಬೆಳೆದು ಬಂದ ರೀತಿಯನ್ನು  ನೆನಪಿಸಿಕೊಳ್ಳುತ್ತಾ ದ್ವಾರಕಾ ಸಮೂಹ ಸಂಸ್ಥೆಗಳ ಮಾಲಕರಾದ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ ಅವರು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು.

ಹಿರಿಯ ಆರ್ಥಿಕ ತಜ್ಞರಾದ ಬಂಗಾರಡ್ಕ ವಿಶ್ವೇಶ್ವರ ಭಟ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಮಕ್ಕಳ ತಜ್ಞೆ ಹಾಗೂ ಆಪ್ತ ಸಲಹೆಗಾರರಾದ ಡಾ. ಸುಲೇಖಾ ವರದರಾಜ್ ಅವರು  ” ವ್ಯಕ್ತಿಯೊಬ್ಬ ತನ್ನ ಜೊತೆಗಿದ್ದವರನ್ನು ಕೂಡಿಕೊಂಡು ಬೆಳೆದಾಗ ಆತನ ನಿಜವಾದ ವಿಕಾಸ ಆಗುತ್ತದೆ.ದ್ವಾರಕಾ ಸಂಸ್ಥೆಯೂ ಒಳ್ಳೆಯ ರೀತಿಯಲ್ಲಿ ಬಡಾವಣೆಗಳನ್ನು ನಿರ್ಮಿಸಿ ಸಮಾಜಕ್ಕೆ ಪೂರಕವಾಗಿ ಮುನ್ನಡೆಯುತ್ತಿದೆ “ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಹರಿಕೃಷ್ಣ ಭಟ್ ಅರ್ತ್ಯಡ್ಕ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು.

ದ್ವಾರಕಾ ಪ್ರತಿಷ್ಠಾನದ ಅಂಗಸಂಸ್ಥೆಯಾದ ದ್ವಾರಕಾ ಪ್ರಕಾಶನದಿಂದ ಪ್ರಕಟಗೊಂಡ ಸತೀ ಸಾವಿತ್ರಿ,ಪುರಾಣ ರಸಪ್ರಶ್ನಾವಲೀ, ವೇದ ವಸಂತ ಹಾಗೂ ವೇದ ಮಾಧವ ಕೃತಿಗಳನ್ನು ವಿವೇಕಾನಂದ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವರು ಮತ್ತು ಸಾಹಿತಿಗಳಾದ ಡಾ. ಶ್ರೀಧರ ಹೆಚ್. ಜಿ ಅವರು ಲೋಕಾರ್ಪಣಗೊಳಿಸಿದರು.
ವಿದ್ವಾನ್ ಗ.ನಾ ಭಟ್ಟ ಮೈಸೂರು ಅವರು ರಚಿಸಿದ ‘ ಸತೀ ಸಾವಿತ್ರಿ ‘ ಕಾದಂಬರಿಯನ್ನು ನರಿಮೊಗರು ಸರಸ್ವತಿ ವಿದ್ಯಾಮಂದಿರದ ಅಧ್ಯಕ್ಷ ಅವಿನಾಶ್ ಕೊಡೆಂಕಿರಿ ಪರಿಚಯಿಸಿದರು. ಕೃಷ್ಣಮೂರ್ತಿ ಕೆಮ್ಮಾರ ಅವರ ‘ ಪುರಾಣ ರಸಪ್ರಶ್ನಾವಲೀ ‘ ಕೃತಿಯನ್ನು ಯುವ ಬರೆಹಗಾರರಾದ ನವೀನಕೃಷ್ಣ ಎಸ್. ಉಪ್ಪಿನಂಗಡಿ ಪರಿಚಯ ಮಾಡಿದರು.
ಪುರೋಹಿತ ಮಿತ್ತೂರು ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದಿಂದ ವೇ.ಬ್ರ ಮಿತ್ತೂರು ಪುರೋಹಿತ ಶ್ರೀನಿವಾಸ ಭಟ್ಟ ಅವರು ಪರಿಷ್ಕರಿಸಿ ದ್ವಾರಕಾ ಪ್ರತಿಷ್ಠಾನದ ಪೋಷಕತ್ವದಿಂದ ಬಂದ ‘ ವೇದ ವಸಂತ ‘ ಹಾಗೂ ‘ ವೇದ ಮಾಧವ ‘ ಕೃತಿಗಳನ್ನು ರಮೇಶ್ ಭಟ್.ಬಿ ಅವರು ಪರಿಚಯಿಸಿದರು.

ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಹಿಮ್ಮೇಳ ವಾದಕರಾದ ಪದ್ಯಾಣ ಶಂಕರನಾರಾಯಣ ಭಟ್, ಭಾರತೀಯ ಸೇನೆ, ಸಮಾಜ ಸೇವೆ ಮತ್ತು ಕೃಷಿ ಕ್ಷೇತ್ರದ ಡಾ. ಗೋಪಾಲಕೃಷ್ಣ ಕಾಂಚೋಡು, ಸಾವಯವ ಕೃಷಿ ಕ್ಷೇತ್ರದ ಸುಬ್ರಹ್ಮಣ್ಯ ಪ್ರಸಾದ ಭಟ್ಟ ನೆಕ್ಕರೆಕಳೆಯ, ಸಾಮಾಜಿಕ ಜಾಲತಾಣ ಹಾಗೂ ಆಹಾರೋದ್ಯಮದ ಸುದರ್ಶನ್ ಭಟ್ ಬೆದ್ರಡಿ, ಹಾಗೂ ವೈಜ್ಞಾನಿಕ ಕ್ಷೇತ್ರದ ಸಾಧಕ ಸ್ವಸ್ತಿಕ್ ಪದ್ಮ ಮುರ್ಗಜೆ ಅವರನ್ನು ಸನ್ಮಾನಿಸಲಾಯಿತು.

ದ್ವಾರಕಾ ಪ್ರತಿಷ್ಠಾನ ಹಾಗೂ ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸಿದ ರಾಮಾಯಣ, ಮಹಾಭಾರತ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ದುರ್ಗಾ ಗಣೇಶ ಕೆ.ವಿ ಅವರು ಪ್ರಾರ್ಥಿಸಿದರು.
ನವೀನಕೃಷ್ಣ ಎಸ್. ಉಪ್ಪಿನಂಗಡಿ ಹಾಗೂ ಶ್ರೀದೇವಿ ಕುರಿಯ ಅವರು ಕಾರ್ಯಕ್ರಮ ನಿರೂಪಿಸಿದರು.
ಅಮೃತಕೃಷ್ಣ ಎನ್.  ಅವರು ವಂದಿಸಿದರು.

ಕೃಷಿ ಮತ್ತು ಆರ್ಥಿಕ ವಿಚಾರ ಗೋಷ್ಠಿ:-
ಗೋಪಾಲಕೃಷ್ಣ ಕಾಂಚೋಡು ಅವರು  ‘ಕೃಷಿಯಲ್ಲಿ ಆಡಿಕೆಗೆ ಪರ್ಯಾಯ’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು.
‘ರಿಯಲ್ ಎಸ್ಟೇಟ್ ಮತ್ತು ಆರ್ಥಿಕತೆ ‘ಯ ವಿಷಯವಾಗಿ ಬಂಗಾರಡ್ಕ ವಿಶ್ವೇಶ್ವರ ಭಟ್ ಅವರು ಮಾತನಾಡಿದರು.
ದೇಶೀ ಗೋವು ಹಾಗೂ ಗವ್ಯೋತ್ಪನ್ನಗಳ ಕುರಿತಾಗಿ ಸುಬ್ರಹ್ಮಣ್ಯ ಪ್ರಸಾದ ಭಟ್ ನೆಕ್ಕರೆಕಳೆಯ ಅವರು ವಿಷಯ ಮಂಡನೆ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು:-
ಕೀರ್ಬೋರ್ಡ್ ತರಬೇತುದಾರರಾದ ಬಾಬು ಕಾಟುಕುಕ್ಕೆ ಹಾಗೂ ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ ಜರುಗಿತು.

ಈ ಸಂದರ್ಭದಲ್ಲಿ ‘ಚೂಡಾಮಣಿ ‘ ತಾಳಮದ್ದಳೆ ನಡೆಯಿತು.
ಭಾಗವತರಾಗಿ ರಮೇಶ್ ಭಟ್ ಪುತ್ತೂರು, ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಚೆಂಡೆ-ಮದ್ದಳೆಯಲ್ಲಿ ಕಿನಿಲಕೋಡಿ ಗಿರೀಶ್ ಭಟ್ ಹಾಗೂ  ಶಿಷ್ಯರು ಸಹಕರಿಸಿದರು.
ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿಗಳು ಮುಮ್ಮೇಳದಲ್ಲಿ ಪಾತ್ರ ನಿರ್ವಹಿಸಿದರು.

ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾನಭೂಷಣ ವೆಂಕಟಕೃಷ್ಣ ಭಟ್ ಗುಂಡ್ಯಡ್ಕ ಮತ್ತು ಬಳಗದವರಿಂದ ‘ ಭಾವಗಾನಲಹರಿ ‘ ಕಾರ್ಯಕ್ರಮ ನೆರವೇರಿತು.

ದ್ವಾರಕಾ ಕಲಾಶಾಲೆಯ ವಿದ್ಯಾರ್ಥಿನಿ ಅವನಿ ಕಲ್ಲೂರಾಯ ಅವರಿಂದ ಏಕವ್ಯಕ್ತಿ ನೃತ್ಯ ರೂಪಕ ‘ ನರಸಿಂಹ ಕೌತ್ವಂ ‘ ಪ್ರದರ್ಶನಗೊಂಡಿತು.

ಮುಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಅವರ ತಂಡದಿಂದ ‘ ಮಧುರಾಕೃತಿ- ಶ್ರೀಕೃಷ್ಣ ಲೀಲೆಗಳು ‘ ಎಂಬ ಪರಿಕಲ್ಪನೆಯಲ್ಲಿ ಭರತನಾಟ್ಯ ನಡೆಯಿತು.

ದ್ವಾರಕೋತ್ಸವದಲ್ಲಿ ಭಾಗವಹಿಸಿದ ಗ್ರಾಹಕರಿಗೆ ದ್ವಾರಕೋತ್ಸವದ ಪ್ರಯುಕ್ತ ರೂ.10,000 ಮೊತ್ತದ ವಿಶೇಷ ಗಿಫ್ಟ್ ಓಚರ್ ವಿತರಿಸಲಾಯಿತು. ಹಾಗೆಯೇ ದ್ವಾರಕೋತ್ಸವದವರೆಗೆ ಸೈಟ್ ಬುಕ್ ಮಾಡಿದವರಿಗೆ ವಿಶೇಷವಾಗಿ ಶೇಕಡಾ 10ರಷ್ಟು ರಿಯಾಯಿತಿ ಲಭ್ಯವಿತ್ತು. ಸ್ಥಳದಲ್ಲೇ ಸೈಟ್ ಬುಕ್ ಮಾಡುವವರಿಗೆ ವಿಶೇಷ ಉಡುಗೊರೆಯನ್ನು ನೀಡುವ ಸೌಲಭ್ಯವಿತ್ತು. ಭಾಗವಹಿಸಿದ ಸಭಿಕರಿಗೆ ಪಾನೀಯ ವ್ಯವಸ್ಥೆ, ಕ್ಯಾಂಡಿ, ಮಧ್ಯಾಹ್ನ ಭೋಜನದ ವ್ಯವಸ್ಥೆ, ಬೆಳಿಗ್ಗೆ ಮತ್ತು ಸಂಜೆ ಉಪಾಹಾರ ವ್ಯವಸ್ಥೆ ಮತ್ತು ರಾತ್ರಿಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Website advt design

Related Blog

Surabhi Goshala
ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುತ್ತಿರುವ ಸುರಭಿ ಗೋಶಾಲೆ ದೇರ್ಲ ಇಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ದೀಪಾವಳಿ ಗೋಪೂಜೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು
parents meeting of sri krishna educational institutions english medium
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಆಂಗ್ಲ ಮಾಧ್ಯಮ ವಿಭಾಗದ ಪೋಷಕರ ಸಭೆ
sri krishna educational institutions primary section parents meeting
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಪ್ರಾಥಮಿಕ ವಿಭಾಗದ ಪೋಷಕರ ಸಭೆ