ಪಟ್ಟೆ ಬಡಗನ್ನೂರು:- ಡಿಸೆಂಬರ್ ತಿಂಗಳಲ್ಲಿ ನಡೆದ 2025-26 ನೇ ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಯ ಭಾಗವಹಿಸಿದ ಒಟ್ಟು 11 ವಿದ್ಯಾರ್ಥಿಗಳು ತೇರ್ಗಡೆಯಾಗುವುದರೊಂದಿಗೆ ಶೇಕಡಾ 100 ಫಲಿತಾಂಶ ದಾಖಲಿಸಿರುತ್ತಾರೆ. ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಒಟ್ಟು 04 ವಿದ್ಯಾರ್ಥಿಗಳು ಹಾಗೂ ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ಒಟ್ಟು 07 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 03 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 07 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 01 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಲೋವರ್ ಗ್ರೇಡ್ ನಲ್ಲಿ ಅದ್ವೈತ್ 8ನೇ ತರಗತಿ, ಅಹನ ಎ 8ನೇ ತರಗತಿ, ಅನ್ವಿತ್ ಎಸ್ ಎಂ 8ನೇ ತರಗತಿ, ಚರಣ್ 8ನೇ ತರಗತಿ, ದೃತಿ ಆರ್ ರೈ 8ನೇ ತರಗತಿ, ಪ್ರತೀಕ್ ಸಿ ಯಚ್ 8ನೇ ತರಗತಿ ಮತ್ತು ಸೂರಜ್ ಪಿ ಯಸ್ 8ನೇ ತರಗತಿ ಈ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಹೈಯರ್ ಗ್ರೇಡ್ ನಲ್ಲಿ ಆದಿತ್ಯಕೃಷ್ಣ ಎ 9ನೇ ತರಗತಿ, ಪ್ರಿನ್ಸನ್ ಲೊಯ್ ಡಿಸೋಜ 9ನೇ ತರಗತಿ, ಸಾಥ್ವಿ ಎಂ 9ನೇ ತರಗತಿ ಮತ್ತು ಯಶ್ವಿತ್ ಕೆ 9ನೇ ತರಗತಿ ಈ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.