ದ್ವಾರಕಾ ಪ್ರತಿಷ್ಠಾನ ಮತ್ತು ಯಕ್ಷದೀವಿಗೆ (ರಿ.) ತುಮಕೂರು ಇದರ ವತಿಯಿಂದ “ಚಿಣ್ಣರ ಉದ್ಯಾನವನ” ದಲ್ಲಿ “ಚಂದ್ರಮಂಡಲ ಚರಿತೆ” ಕಾರ್ಯಕ್ರಮ.

March 31, 2025
Chinnara udyanavana

ದಿನಾಂಕ :- 30-03-2025 ರಂದು ದ್ವಾರಕಾ ಕಾರ್ಪೊರೇಷನ್ ಪ್ರೈ. ಲಿ. ಇದರ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಮತ್ತು ಯಕ್ಷದೀವಿಗೆ (ರಿ.) ತುಮಕೂರು ಸಹಯೋಗದಲ್ಲಿ ಪುತ್ತೂರು ನಗರದ “ಚಿಣ್ಣರ ಉದ್ಯಾನ” ದಲ್ಲಿ “ಚಂದ್ರಮಂಡಲ ಚರಿತೆ” ಯಕ್ಷಗಾನ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಯುತ ಸುಂದರ ಪೂಜಾರಿ ಬಡಾವು ಸ್ಥಾಯಿ ಸಮಿತಿ ಅಧ್ಯಕ್ಷರು, ನಗರಸಭೆ ಪುತ್ತೂರು ಇವರು ಉದ್ಘಾಟಿಸಿ ಮಾತಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಭಟ್, ಪುತ್ತೂರು ನಗರಸಭೆ ಉಪಾಧ್ಯಕ್ಷರಾದ ಶ್ರೀಯುತ ಬಾಲಚಂದ್ರ ಕೆಮ್ಮಿಂಜೆ ಮತ್ತು ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ಗಣರಾಜ ಕುಂಬ್ಳೆ ಸಭೆಯಲ್ಲಿ ಉಪಸ್ಥಿತರಿದ್ದರು. ಗಣ್ಯರನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಯುತ ಅಮೃತಕೃಷ್ಣ ಎನ್ ಇವರು ಕೃತಜ್ಞತಾಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗಣ್ಯರು ಮಾತನಾಡುತ್ತಾ ಪುತ್ತೂರು ನಗರದಲ್ಲಿರುವ ಉದ್ಯಾನವನಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆದು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತಾ ದ್ವಾರಕಾ ಪ್ರತಿಷ್ಠಾನದ ಇಂತಹ ಸಮಾಜಮುಖಿ ಕೆಲಸವನ್ನು ಪ್ರಸಂಶಿಸಿದರು.
ಸಭಾ ಕಾರ್ಯಕ್ರಮದ ನಂತರ ಶ್ರೀಯುತ ಪದ್ಮನಾಭ ಸಿಬಂತಿ ಮತ್ತು ಶ್ರೀಮತಿ ಆರತಿ ಪಟ್ರಮೆ ಇವರ ನೇತೃತ್ವದ ಯಕ್ಷದೀವಿಗೆ (ರಿ.) ತುಮಕೂರು ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗಾನದಲ್ಲಿ ಭಾಗವತರಾಗಿ ಪ್ರಶಾಂತ್ ರೈ ಮುಂಡಾಲಗುತ್ತು ಹಾಗೂ ಹಿಮ್ಮೇಳದಲ್ಲಿ ಮುರಳೀಧರ ಕಲ್ಲೂರಾಯ, ಅವಿನಾಶ ಬೈಪಡಿತ್ತಾಯ ಮತ್ತು ಆದಿತ್ಯಕೃಷ್ಣ ದ್ವಾರಕಾ ಇವರು ಸಹಕರಿಸಿ, ಯಕ್ಷದೀವಿಗೆ ತಂಡದವರು ಮುಮ್ಮೇಳದಲ್ಲಿ ಪಾತ್ರವನ್ನು ನಿರ್ವಹಿಸಿದರು.

ಈ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಮತ್ತು ಧನ್ಯವಾದ ಸಮರ್ಪಣೆಯನ್ನು ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಯುತ ಗಣರಾಜ ಕುಂಬ್ಳೆ ಇವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕಲಾಭಿಮಾನಿಗಳು ಮತ್ತು ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

Website advt design

Related Blog

Surabhi Goshala
ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುತ್ತಿರುವ ಸುರಭಿ ಗೋಶಾಲೆ ದೇರ್ಲ ಇಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ದೀಪಾವಳಿ ಗೋಪೂಜೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು
parents meeting of sri krishna educational institutions english medium
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಆಂಗ್ಲ ಮಾಧ್ಯಮ ವಿಭಾಗದ ಪೋಷಕರ ಸಭೆ
sri krishna educational institutions primary section parents meeting
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಪ್ರಾಥಮಿಕ ವಿಭಾಗದ ಪೋಷಕರ ಸಭೆ