ಗೋಕುಲ ಬಡಾವಣೆಯಲ್ಲಿ ಆಯುಧ ಪೂಜೆ ಹಾಗೂ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ

October 2, 2025
Dwaraka Ayudha pooja
ದಿನಾಂಕ 1.10.2025 ಮುಕ್ರಂಪಾಡಿಯ ಗೋಕುಲ ಬಡಾವಣೆಯಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ವಾಹನ ಪೂಜೆ, ಆಯುಧ ಪೂಜೆಯು ಬಹಳ ವಿಜೃಂಭಣೆಯಿಂದ ನಡೆಯಿತು. ಆಯುಧ ಪೂಜೆಯ ಪ್ರಯುಕ್ತ ವಾಲಿ-ಸುಗ್ರೀವ ಕಾಳಗ ಎಂಬ ಯಕ್ಷಗಾನ ತಾಳಮದ್ದಳೆಯು ಸಂಯೋಜನೆಗೊಂಡಿತ್ತು. 

ಕಾರ್ಯಕ್ರಮವನ್ನು ದ್ವಾರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಭಟ್ ಇವರ ಮಾತೃಶ್ರೀಯಾದ ಶ್ರೀಮತಿ ಲಕ್ಷ್ಮೀ ಅಮ್ಮ ಇವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. 

ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳ ದಲ್ಲಿ ದ್ವಾರಕಾ ಪ್ರತಿಷ್ಠಾನದ  ಯಕ್ಷಗಾನ ಗುರುಗಳು ಆದ ಶ್ರೀಯುತ ಲಕ್ಷ್ಮೀನಾರಾಯಣ ಭಟ್ಟ ಬಟ್ಯ ಮೂಲೆ ಹಾಗೂ ಶ್ರೀ ಆದಿತ್ಯ ಕೃಷ್ಣ ದ್ವಾರಕಾ ಇವರು ಭಾಗವತಿಕೆಯಲ್ಲಿ ಸಹಕರಿಸಿದರು, ಹಿಮ್ಮೇಳ ಗುರುಗಳಾದ ಶ್ರೀ ಗಿರೀಶ ಭಟ್ಟ ಕಿನಿಲ ಕೋಡಿ, ಶ್ರೀ ಕೃಷ್ಣಪ್ರಸಾದ ದಿವಾಣ, ಕುಮಾರಿ ಅಕ್ಷರಿ  ದ್ವಾರಕಾ ಹಿಮ್ಮೇಳದಲ್ಲಿ ಸಹಕರಿಸಿದರು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ಗಣರಾಜ ಕುಂಬಳೆ, ಶ್ರೀ ಸರ್ಪಂಗಳ ಈಶ್ವರ ಭಟ್ಟ ಹಾಗೂ ಈಶ್ವರ ಭಟ್ಟ ಇವರು ಮುಮ್ಮೇಳದಲ್ಲಿ ಭಾಗವಹಿಸಿದರು. 

ವೇದಮೂರ್ತಿ ಶ್ರೀ ಕೃಷ್ಣ ಕುಮಾರ ಉಪಾಧ್ಯಾಯರು ವೈದಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಬಡಾವಣೆಯ ನಿವಾಸಿಗಳು, ಸಂಸ್ಥೆಯ ಸಿಬ್ಬಂದಿಗಳು ಹಾಗೂ ಬಂದು ಮಿತ್ರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ದ್ವಾರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಭಟ್ ಇವರು ಸ್ವಾಗತಿಸಿದರು. ದ್ವಾರಕಾ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಯುತ ಅಮೃತ ಕೃಷ್ಣ ಇವರು ಗಣ್ಯರಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಕುಮಾರಿ ಧನ್ಯಶ್ರೀ ಮಿಂಚಿನಡ್ಕ ಧನ್ಯವಾದ ಸಮರ್ಪಿಸಿದರು, ಸಂಸ್ಥೆಯ ಸಿಬ್ಬಂದಿಯಾದ ಶ್ರೀ ದುರ್ಗಾ ಗಣೇಶ್ ಇವರು ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿದರು.
Dwaraka Ad

Related Blog

ಡ್ರಾಯಿಂಗ್ ಗ್ರೇಡ್ ಪರೀಕ್ಷೆ 2025-26 – ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆಗೆ 100 ಶೇಕಡಾ ಫಲಿತಾಂಶ
dwarkotsava 2026 invitation release - Featured
ದ್ವಾರಕೋತ್ಸವ – 2026 ಆಮಂತ್ರಣ ಪತ್ರಿಕೆ ಬಿಡುಗಡೆ
pre-exam preparation
ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ತರಬೇತಿ